Sunday, January 1, 2017

ಕಲ್ಲರಳಿ ಮತ್ತೆ ಹೂವಾಗಿ

ಕಲ್ಲುಬಂಡೆಯ ಮನಸು
ಎಲ್ಲೆಲ್ಲೋ ಸುತ್ತಿ ಬಂದು
ಬಲ್ಲವರ ಪೆಟ್ಟು ತಿಂದು
ಕಲ್ಲರಳಿ ಹೂವಾಗಿ

ಎಲ್ಲ ಭಾವಗಳು ಮಣ್ಣಾಗಿ
ತಲ್ಲಣಗಳಲಿ ಹುದುಗಿರುವಾಗ
ಮೆಲ್ಲನೆ ನೆನಪೊಂದು ಚಿಗುರೊಡೆದು
ಕಲ್ಲರಳಿ ಮತ್ತೆ ಹೂವಾಗಿ

(ಮೊದಲ ನಾಲ್ಕು ಸಾಲುಗಳು 2008ರಲ್ಲಿ ನನ್ನ ಹಳೆಯ ಬ್ಲಾಗಿನಲ್ಲಿ ಬರೆದಿದ್ದು. ಆ ಬ್ಲಾಗ್ ಉಪಯೋಗಿಸದೆ ಬ್ಲಾಕ್ ಆಗಿ ಹೋಯಿತು. ಕೊನೆಯ ನಾಲ್ಕು ಸಾಲುಗಳು ಈಗ 2017ರಲ್ಲಿ ಮತ್ತೆ ಬ್ಲಾಗಿಸಲು ಪ್ರಾರಂಭಿಸಿದಾಗ ಬರೆದಿದ್ದು)